Matsya lyrics ( ಕನ್ನಡ ) – Arfaz ullal – Shamitha malnad
Matsya is a kannada song from the movie Shamitha malnad. Matsya song is sung by Arfaz Ullal and Shamitha Malnad and the music is composed by Sunil Myra.
Album | Matsya |
Singer | Arfaz Ullal , Shamitha Malnad |
Lyrics & Concept | Dr Umesh D |
Music | Sunil Myra |
ಮತ್ಸ್ಯ
ಮಳೆಯ ಹನಿಗಳ
ಆಗಮನಕೆ ಕಾದಿರುವೆ ನಾನು ಗುಟುಕು ಹನಿ ಸಿಕ್ಕರೆ ಸಾಕು
ಬದುಕುಳಿವೆ ನಾನು
ತಾಳೆನಾ ತಾಳೆನಾ
ಜಲರಾಶಿಯಲ್ಲಿ ಜನನ
ಮಳೆಗಾಲವೆ ನಿನ್ನ ಆಗಮನ
ಚಿಟಪಟ ಮಳೆಯಲ್ಲಿ
ಮಿರಮಿರ ಮಿಂಚುತ
ನುಸುಳುವೆ ಮೀನಾಕ್ಷಿ
ನಿನ್ನ ಕಣ್ಗಳೆ ಕಮಲಾಕ್ಷಿ
ನುಸುಳುವೆ ಮೀನಾಕ್ಷಿ
ನಿನ್ನ ಕಣ್ಗಳೆ ಕಮಲಾಕ್ಷಿ
ಯಾರೆ ನೀನು
ಹೇಳು ನೀನು
ಮತ್ಸ್ಯ ನಾನೆ ಮಾನವ
ಮೀನು ನಾನೆ ಮಾನವ
ಮತ್ಸ್ಯ ನಾನೆ ಮಾನವ
ಮೀನು ನಾನೆ ಮಾನವ
ಬ್ರಹ್ಮ ಕೂಡಾ ನಾಚುವಂತ
ಅಂದ ನಿನದು ಕೇಳು ನೀನು
ಯಾರಿಗಾಗಿ ನೀನು ಜನಿಸಿದ್ದು
ನಮ್ಮ ಜೀವಕೆ ಆಧಾರ ಆಗಿರುವೆ ನೀ ಇಂದು
ನಮ್ಮ ಹೃದಯದ ಭಾಗ ನೀ ಇಂದು
ಕಡಲಿನನಾರಿಯಲ್ಲಿ ನಲಿಯುವೆ ನಾನು
ನಿಂತ ನೀರಲ್ಲಿಯೆ ಬೆಳೆಯುವೆ ನಾನು
ಬೇಡಲ್ಲ ಏನೂ ನಿನಗೆ
ಕೊಡು ಎಂದು ನಾನು
ನಾ ಬೆಳೆದು ಬಂದ ಮೇಲೆ
ನಿನ್ನ ಆಸ್ತಿ ನಾನು
ನೀ ಬೀಸುವ ಬಲೆಯೊಳಗೆ
ನಾ ಬಂಧಿಯಾಗುವೆ
ನಿಮಗಾಗಿ ನನ್ನ ಜೀವನ
ಮುಡಿಪೆಂದು ನಾನು ಬಾಳುವೆ
ಮತ್ಸ್ಯ ನಾನು
ಕೇಳು ನೀನು
ಮತ್ಸ್ಯ ನಾನು
ಕೇಳು ನೀನು
ನಿನ್ನನ್ನೇ ನಂಬಿಕೊಂಡು
ಬದುಕುತಿದೆ ಎಷ್ಟೋ ಜೀವ
ನಮ್ಮೆಲ್ಲರ ಪಾಲಿಗೆ ನೀನಾದೆ ದೊಡ್ಡ ಜೀವ
ಬಲೆಯನ್ನು ಬೀಸುತ್ತಾ
ನಾ ಮೀನುಗಾರನಾದೆ
ಹಸಿವನ್ನು ನೀಗುತ್ತಾ
ನಮಗೆ ನೀನು ಆಸರೆಯಾದೆ
ಅಳಿಯಲು ಬಿಡೆನು ನಿನ್ನನ್ನು
ಉಳುಸುವೆನು ಎಂದೂ ನಿನ್ನನ್ನು
ದೈವ ನೀನು ಉಸಿರೆ ನೀನು
ನಾಡಿಗೆಲ್ಲ ಮತ್ಸ್ಯ ನೀನು
ದೇಶಕ್ಕಿದೆ ನಿನ್ನ ಕೊಡುಗೆ
ಹೆಮ್ಮೆಯಿದೆ ಇಂದು ನನಗೆ
ದೇಶಕ್ಕಿದೆ ನಿನ್ನ ಕೊಡುಗೆ
ಹೆಮ್ಮೆಯಿದೆ ಇಂದು ನನಗೆ