Chilka chilka song lyrics ( ಕನ್ನಡ ) – Mysore diaries

Chilka chilka is a kannada song from the movie Mysore diaries. The song is sung by Charan Raj and the lyrics are written by Dhananjay Ranjan.

Song Chilka chilka
Singer Charan Raj
Music Charan Raj
Lyrics Dhananjay Ranjan
Movie Mysore diaries

ಆ ಮೊದಲ ಪ್ರೀತಿ ಚಂದ
ಹೇಳೋದೆ ಒಂದು ಆನಂದ
ಅವಳ ಕದ್ದು ಮುಚ್ಚಿ ನೋಡಿ
ಓಡೋದೆ ಹಿಂದೆ ಹಾಡಿ
ಭಾನುವಾರ ಜಂಗಲ್ ಬುಕ್
ಡಿ ಡಿ ಒನ್ ಅಲ್ಲಿ ಬರ್ತಿತ್ತು
ಕೇಡಿ ರೋಡಲ್ಲಿ ಸ್ಕೂಟಿ ಮೇಲೆ
ಚೆಂಡು ಒಂದು ಹೋಗ್ತಿತ್ತು

ಕೈ ಬಾಯಿ ಕಣ್ಣು ಮೂಗು ಎಲ್ಲಾ ಯಾಂಗಲ್
ಎದ್ದು ಬಿದ್ದು ಮಾಡಿ ಮಾಡಿ ಕೊಟ್ಟೆ ಸಿಗ್ನಲ್
ಕೊಟ್ಟೆ ಸಿಗ್ನಲ್ ಕೊಟ್ಟೆ ಸಿಗ್ನಲ್
ಜಗವೇ ಅಮಲು ನಗಲು ಅವಳು
ಹಂಗಾಗಿ ನಾನೂನು ಲವ್ ಅಲ್ಲಿ ಲಾಕ್ ಆದೇನಾ
ಚಿಲ್ಕ ಚಿಲ್ಕ ಚಿಲ್ಕ
ತೆರೆದು ಪ್ರೀತಿ ಚಿಲ್ಕ
ಚಿಲ್ಕ ಚಿಲ್ಕ ಚಿಲ್ಕ
ಕುಡಿದೆ ನಾವು ಲವ್ ಪಾನಕ
ಶಂಖದಿಂದ ತೀರ್ಥ ಕೊಟ್ಟರೆ
ಕುಡಿದೆ ಹಂಗೆ ಹೋಗ್ತಾರ
ಸಕ್ಕರೆ ಅಂತ ಹುಡುಗಿ ನಕ್ಕರೆ
ಸುಮ್ಮನೆ ಯಾರಾದ್ರೂ ಈರ್ತಾರ

ಪ್ರೀತಿಯ ಚಂದದ ಬಿಂದಿಗೆ
ತುಂಬುವ ಹೊತ್ತಿಗೆ
ಬರ್ತಿದ್ಲು ಮಲ್ಲಿಗೆ
ನಿಂತಲ್ಲೆ ನಲ್ಲಿಯ ತಿರುಗಿ
ನಾಚಿಕೆ ನಲುಗಿ
ಆರ್ಸ್ತಿದ್ಲು ಸಂಡಿಗೆ
ಹಿಂದೆ ಮನೆಯ
ಬಿಂದು ಅವಳು ಆ ಆ ಆ
ಪ್ರೇಮ ಪುಟವ ಆ ಆ ಆ ಆ
ತೆರೆದೆ ಬಿಟ್ಲು
ಹಿಂಗಾಗಿ ನಾನೂನೂ ನಲ್ಲಿಗೆ ಲಾಕಾದೆನಾ
ಚಿಲ್ಕ ಚಿಲ್ಕ ಚಿಲ್ಕ
ತೆರೆದು ಪ್ರೀತಿ ಚಿಲ್ಕ
ಚಿಲ್ಕ ಚಿಲ್ಕ ಚಿಲ್ಕ
ಕುಡಿದೆ ನಾನಿನ್ನು ಲವ್ ಪಾನಕ

ಒಂಟಿಕೊಪ್ಪಲ್ ಟೆಂಟಿನಲ್ಲಿ
ಮುಕ್ತಪ್ಪ ಬರ್ತಿತ್ತು
ಒಂಟಿಯಾಗಿ ನನ್ನ ರೋಸ್
ಮಾಡಿಮೇಲೆ ನಿಂತಿತ್ತು
ಆ ಆ ಆ ಆ
ಆ ಆ ಆ ಆ

ಬಾನಿನಲ್ಲಿ ಏಳಿದ ಬಣ್ಣ
ಭಾನುಪ್ರಿಯ ನನ್ನ ಹುಡುಗೀನ
ನೋಡಿದೆನು ಹುಣ್ಣಿಮೆಯಂದು
ಮಾಡಿ ಮನೆ ಮೊಹಬತ್ ನಂದು
ನಗೂ ಅವಳು
ಮನಸೆ ಮುಗಿಲು
ಹಂಗಾಗಿ ನಾನೂನು ಬಾಲ್ಕನಿ ಬೋಲ್ಡ್ ಆದೆನಾ

ಚಿಲ್ಕ ಚಿಲ್ಕ ಚಿಲ್ಕ
ತೆರೆದು ಪ್ರೀತಿ ಚಿಲ್ಕ
ಚಿಲ್ಕ ಚಿಲ್ಕ ಚಿಲ್ಕ
ಕುಡಿವೆ ನಾನಿನ್ನೂ ಲವ್ ನಾ ಪಾನಕ
ಚಿಲ್ಕ ಚಿಲ್ಕ ಚಿಲ್ಕ
ತೆರೆದು ಪ್ರೀತಿ ಚಿಲ್ಕ
ಚಿಲ್ಕ ಚಿಲ್ಕ ಚಿಲ್ಕ
ಕುಡಿವೆ ನಾನಿನ್ನೂ ಲವ್ ನಾ ಪಾನಕ

Leave a Reply

Your email address will not be published. Required fields are marked *