Kanninda jaari lyrics ( ಕನ್ನಡ ) – Govinda govinda
Kanninda jaari is a Kannada song from the movie Govinda govinda. Kanninda jaari song is been sung by Anuradha bhat. The lyrics are composed by Vijay Vishwavani.
Song | Kanninda jaari |
Singer | Anuradha bhat |
Lyrics | Vijay Vishwavani |
Movie | Govinda govinda |
Music | Hithan Hasan |
ಕಣ್ಣಿಂದ ಜಾರಿ
ಹೊಸತೊಂದು ದಾರಿ
ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ
ಹೇಳಾಯ್ತು ನೀ ನನ್ನ ಕೊಡುಗೆ
ಓ ಹೋ ತೀರ ಸೊಗಸಾದ ಗಳಿಗೆ
ಗಾಳಿ ತಂದಂತಹ ಚಳಿಗೆ
ಒಲವಿಂದ ತೆಗೆದು ಬೊಗಸೇಲಿ ಹಿಡಿದು ಕೊಡಲೇನು ಈ ನನ್ನ ಹೃದಯ
ತುಟಿಯಲ್ಲಿ ನಗುವಾಗಿ ಹೋದೆ
ಇರುಳಲ್ಲಿ ಬೆಳಕಾದ ಹಾಗೆ
ತುಟಿಯಲ್ಲಿ ನಗುವಾಗಿ ಹೋದೆ
ಇರುಳಲ್ಲಿ ಬೆಳಕಾದ ಹಾಗೆ
ಮರೆತೆ ನನ್ನನ್ನೇ ನೋಡಿ ನಿನ್ನನ್ನೇ
ಬರೀ ಮೌನ ಸಂಭಾಷಣೇನೆ
ಹೋ ಒಲವಾ ಪಿತೂರಿ ದಾರಿಯ ತೋರಿ
ನೀನೇನೆ ಇದಕ್ಕೆ ರೂವಾರಿ
ಸ್ನೇಹಕೂ ಮಿಗಿಲಾದ ಹೆಜ್ಜೆ
ಹೇಳೋಕೆ ನನಗೇನೂ ಲಜ್ಜೆ
ಸ್ನೇಹಕೂ ಮಿಗಿಲಾದ ಹೆಜ್ಜೆ
ಹೇಳೋಕೆ ನನಗೇನೂ ಲಜ್ಜೆ
ಗೆಳೆಯಾ ನೀ ನನ್ನ ಗೆಳತಿನಾನಲ್ಲ
ಉಸಿರಾದೆ ನೀ ನನ್ನ ಒಳಗೆ
ಅನುಮಾನವೇ ಇಲ್ಲ
ಅನುಯಾಯಿನಲ್ಲ
ನೆರಳಾದೆ ನಾನಿಂದು ನಿನ್ನ
ಕಣ್ಣಿಂದ ಜಾರಿ
ಹೊಸತೊಂದು ದಾರಿ
ತೆರೆದಾಯ್ತು ಆ ನಿನ್ನ ಕಡೆಗೆ
ಕನಸೆಲ್ಲಾ ಸೇರಿ ನೂರಾರು ಸಾರಿ
ಹೇಳಾಯ್ತು ನೀ ನನ್ನ ಕೊಡುಗೆ