Sada kannali song lyrics ( ಕನ್ನಡ ) – Kaviratna Kalidasa
Sada kannali Pranayada Kavithe Haduve is a kannada song from the movie Kaviratna Kalidasa. The song is sung by Dr Rajkumar and Vani Jayaram.Film | Kavirathna Kalidasa |
Song | Sada Kannali Pranayada Kavithe Haduve |
Singer | Dr Rajkumar, Vani Jayaram |
Lyrics | Chi Udayashankar |
Music | M Ranga Rao |
ಆ…
ಸದಾ ಕಣ್ಣಲೆ ಪ್ರಣಯದ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ
ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ ರತಿಯೇ ಧರೆಗಿಳಿದಂತೆ
ಈ ಅಂದಕೆ ಸೋತೆನು ಸೋತೆ ನಾನು
ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ
ಸುರಿವ ಮಳೆ ನೀರೆಲ್ಲ ಪನ್ನೀರ ಹನಿಹನಿಯಂತೆ
ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ ಸೋತೆನು ಸೋತೆ ನಾನು
ಸದಾ ಕಣ್ಣಲೆ…